ಶ್ರೀಯುತರು ನನ್ನ ಗುರುಗಳು ಅಂತ ಹೇಳೋದಕ್ಕೆ ನನಗೆ ತುಂಬಾಹೆಮ್ಮೆ. ಇಂತಹ ಖ್ಯಾತರನ್ನು ಅವರ ವಾದನ ಸುಧೆಯನ್ನು ಸವಿದದ್ದು ಯಲ್ಲಾಪುರದ ಜನತೆಯ ಭಾಗ್ಯ.ಉಸ್ತಾದ್ ಹಮೀದ್ ಖಾನ್ ಅವರು ಇಂದೋರ್ ಬಿಕಾನೇರ್ ಘರಾನಾ ದ ಸಿತಾರ್ ವಾದಕರು. ಇವರು ಸಿತಾರ್ ರತ್ನ ರೆಹಮತ್ ಖಾನ್ ಅವರ ೬ ನೆಯ ಪೀಳಿಗೆ. ಸಿತಾರ್ ವಾದನದಲ್ಲಿ ಇವರು ತೋರುವ ನಿಷ್ಠೆ ಅತ್ಯದ್ಭುತ. ಅವರ ಗರಡಿಯಲ್ಲಿ ಪಳಗಿದ ಅವರ ಮಗ ಮೊಹಸಿನ್ ಖಾನ್ ಒಬ್ಬ ಅಧ್ಭುತ ಯುವ ಪ್ರತಿಭೆ. ಕೇವಲ ೬ ನೆಯ ವಯಸ್ಸಿನಲ್ಲಿ ಸಿತಾರ್ ಅನ್ನು ಹಿಡಿದ ಈತ ಈಗ ಕರ್ನಾಟಕದಲ್ಲಿ ಸಿತಾರ್ ಪ್ರೇಮಿಗಳ ಮನೆಮಾತು.
ಆದರೆ ನಾನು ಈಗ ಹೇಳಹೊರಟಿರುವುದು ಕೇವಲ ಹಮೀದ್ ಖಾನ್ ಅವರ ಸಂಗೀತ ಸಾಧನೆಯನ್ನಲ್ಲ. ಅವರ ಸಮಾಜ ಸೇವೆಯ ಇನ್ನೊಂದು ಮುಖವನ್ನು. ನಮ್ಮ ಸಂವಿತ್ ಗೆ ಮೂಲ ಪ್ರೇರಣೆಯೇ ಶ್ರೀಯುತರು. ಅದಕ್ಕಾಗಿಯೇ ನನ್ನ ಮತ್ತು ಗುರುಗಳ ಸಾಮರಸ್ಯ ಅವಿನಾಭಾವವಾಗಿದೆ. ಶ್ರೀಯುತರು ಕಲ್ಕೇರಿ ಶಾಲೆಯ ಏಳ್ಗೆಯಲ್ಲಿ ತಮ್ಮನ್ನು ಬಹಳಷ್ಟು ಸಮಯದಿಂದ ತೊಡಗಿಸಿಕೊಂಡು ಬಂದವರು. ಆ ಅನಾಥ ಮಕ್ಕಳ ಜೊತೆ ಸಮಯ ಕಳೆದವರು. ಇಂತಹ ಪೂಜ್ಯರು ನಮ್ಮ ಜೊತೆ ಇದ್ದು, ನಮ್ಮ ಸಂವಿತ್ ಅನ್ನು ಉದ್ಘಾಟನೆ ಮಾಡಿದ್ದರಿಂದ. ಮುಂಬರುವ ದಿನಗಳಲ್ಲಿ ನಾವೂ ಕೂಡಾ ಅವರ ಆಶಯಗಳನ್ನು ಮೈಗೂಡಿಸಿಕೊಳ್ಲೋಣ, ಎನ್ನಬಹುದಲ್ಲವೇ?
ಎಲ್ಲಿ ಅವಕಾಶಗಳಿವೆಯೋ, ಸೌಲಭ್ಯಗಳಿವೆಯೋ ಅಲ್ಲಿ ನಮ್ಮ ಅವಶ್ಯಕತೆ ಏನಿದೆ? ಎಲ್ಲಿ ನಿಜವಾದ ಅವಶ್ಯಕತೆ ಇದೆಯೋ, ಯಾರು ನಿರ್ಗತಿಕರೋ ಅವರನ್ನು ತಲುಪುವ ಪ್ರಯತ್ನ ನಮ್ಮದಾಗಲಿ. ಆಗ ಶಿಕ್ಷಣ ಸಾರ್ಥಕತೆಯನ್ನು ಕಾಣಲಿದೆ.
No comments:
Post a Comment